Thursday, August 20, 2020

Thursday, August 13, 2020

ಬದುಕು ಬದಲಿಸಿದ ಕೊರೊನ ....

 ವಿಶ್ವವನ್ನೇ ತಲ್ಲಣಗೊಳಿಸಿ ದಂತಹ ಮಹಾಮಾರಿ ಕೊರೊನ... ಎಂದು ಊಹಿಸಿರಲಿಲ್ಲ ಇಂತಹದೊಂದು ಸಂದಿಗ್ಧ ಪರಿಸ್ಥಿತಿ ಬಂದು ನಮ್ಮನ್ನು ಇಂತಹ ಸ್ಥಿತಿಗೆ ಕರೆದುಕೊಂಡು ಹೋಗುತ್ತದೆ ಎಂದು ಕಣ್ಣಿಗೆ ಕಾಣಿಸ ದಂತಹ ಅತ್ಯಂತ ಚಿಕ್ಕ ವೈರಸ್ ನಮ್ಮೆಲ್ಲರನ್ನು ಆಟವಾಡಿಸುತಿದೆ. ನಾನು ಶ್ರೇಷ್ಠ ಎಂಬ ಭ್ರಮೆಯಲ್ಲಿರುವ ಮಾನವನಿಗೆ ಸರಿಯಾಗಿ ಪಾಠ ಕಲಿಸುತ್ತಿದೆ,

           ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರಾದವರು ನಾವು ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಧೈರ್ಯ ಮೂಡಿಸುವಂತಹ ಕೆಲಸವನ್ನು ಮಾಡಬೇಕಾಗಿದೆ ಅದರ ಜೊತೆಗೆ ಇದರ ಮುಂಜಾಗ್ರತಾ ಕ್ರಮಗಳನ್ನು ತಿಳಿಸಬೇಕಾಗಿದೆ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿ ಆತ್ಮಸ್ಥೈರ್ಯವನ್ನು ಮೂಡಿಸಬೇಕಾಗಿದೆ. ಬದಲಾಗುತ್ತಿರುವ ಪರಿಸ್ಥಿತಿಗನುಗುಣವಾಗಿ ಮಕ್ಕಳಿಗೆ ಪಾಠದ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಬಹಳ ಅವಶ್ಯಕವಾಗಿದೆ ಸ್ವಚ್ಛತೆಯ ಅರಿವು, ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವನೆ ಈ ಎಲ್ಲಾ ವಿಷಯಗಳ ಕುರಿತು ಮಕ್ಕಳು ಮತ್ತು ಪಾಲಕರಿಗೆ ತಿಳಿ ಹೇಳಬೇಕಾಗಿದೆ. ಈ ಮಹಾಮಾರಿ ನಮ್ಮನ್ನು ಬಿಟ್ಟು ಹೋಗುವುದು ಕನಸಿನ ಮಾತು ಇದರೊಂದಿಗೆ ಜೀವನವನ್ನು ಹೇಗೆ ಮಾಡುವುದು ಎಂಬುದರ ಅರಿವನ್ನು ತಿಳಿಸಿ ಕೊಡಬೇಕಾದದ್ದು ಬಹಳ ಅಗತ್ಯ,  ಅಂತರವನ್ನ ಕಾಯ್ದುಕೊಳ್ಳುವುದು ಇವೆಲ್ಲವೂ ಕೂಡ ಸದ್ಯದ ಪರಿಸ್ಥಿತಿಗೆ ಅನಿವಾರ್ಯ. ಧೈರ್ಯಗೆಡದೆ ಎಲ್ಲಾ ಕ್ರಮಗಳನ್ನು ನಾವು ರೂಡಿಸಿಕೊಂಡು ಹೊಸ ಜೀವನಶಲಿಯನ್ನು ಆರಂಭಿಸೋಣ ದೃತಿಗೆಡದೆ ನಿರೀಕ್ಷೆಯನ್ನು ಬಿಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗೋಣ.

Vidyagama

 ವಿದ್ಯಾಗಮ ಕಾರ್ಯಕ್ರಮದ ಕುರಿತು  **** * ಸಾಮರ್ಥ್ಯಗಳ ಪಟ್ಟಿ ***** ***** ಚಟುವಟಿಕೆಗಳ ಪಟ್ಟಿ ***** ***** ನಮೂನೆಗಳು *****