ವಿಷಯ: ಪರಿಸರ ಅಧ್ಯಯನ
ತರಗತಿ: ಐದನೇ
1. ಜೀವಿಗಳ ಉಸಿರಾಡುತ್ತವೆ (ಸರಿ /ತಪ್ಪು )
ಉತ್ತರ - ಸರಿ.
2. ಸಸ್ಯಗಳು ಆಹಾರವನ್ನು ಯಾವ ಭಾಗದಲ್ಲಿ ತಯಾರಿಸಿಕೊಳ್ಳುತ್ತವೆ?
ಉತ್ತರ- ಎಲೆ
3. ಎಲೆಗಳು ಹಸಿರಾಗಿರಲು ಕಾರಣ ವೇನು?
ಉತ್ತರ- ಪತ್ರಹರಿತು
4. ಕೀಟಹಾರಿ ಸಸ್ಯ ಗಳಿಗೆ ಉದಾಹರಣೆ ಹೇಳು.
ಉತ್ತರ - ಡ್ರಾಸಿರಾ, ನೆಪೆಂಥಿಸ್
5. ಸಸ್ಯ ಹಾಗೂ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳಿಗೆ ಏನೆಂದು ಕರೆಯುತ್ತಾರೆ?
ಉತ್ತರ- ಮಿಶ್ರಹಾರಿಗಳು
6. ಏಕದಳ ಸಸ್ಯಗಳಿಗೆ ಉದಾಹರಣೆ ಹೇಳು.
ಉತ್ತರ- ಜೋಳ ,ರಾಗಿ
7. ಮಾಂಸಾಹಾರಿ ಗೆ ಒಂದು ಉದಾಹರಣೆ ಕೊಡಿ.
ಉತ್ತರ- ಹುಲಿ
8. ನಿನ್ನ ಕುಟುಂಬದಲ್ಲಿ ಎಷ್ಟು ತಲೆಮಾರು ಗಳಿವೆ?
ಉತ್ತರ-
9. ಎರಡು ತಲೆಮಾರಿನವರು ವಾಸಿಸುವ ಚಿಕ್ಕ ಕುಟುಂಬವು ಯಾವ ಕುಟುಂಬದ ವಿಧ.
ಉತ್ತರ- ವಿಭಕ್ತ ಕುಟುಂಬ
10. ಸಮುದಾಯದಲ್ಲಿ ಎಷ್ಟು ವಿಧಗಳು?
ಉತ್ತರ- ಮೂರು ವಿಧ
11. ಸಾಹಸಕಡೆಗಳಿಗೆ ಒಂದು ಉದಾಹರಣೆ ಬರೆ .
ಉತ್ತರ- ಪರ್ವತಾರೋಹಣ
12. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಶಿಖರ ಯಾವುದು?
ಉತ್ತರ: ಮೌಂಟ್ ಎವರೆಸ್ಟ್
13.ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲ ಭಾರತೀಯ ಮಹಿಳೆ ಯಾರು?
ಉತ್ತರ: ಬಚೇಂದ್ರಿ ಪಾಲ್
14. ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದವರು ಯಾರು?
ಉತ್ತರ: ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನೋರ್ಗೆ
15. ಸೂರ್ಯನಿಂದ ದೊರಕುವ ಶಕ್ತಿಯನ್ನು ಏನೆಂದು ಕರೆಯುತ್ತಾರೆ?
ಉತ್ತರ: ಸೌರಶಕ್ತಿ
16. ರಾಷ್ಟ್ರೀಯ ಅರಣ್ಯ ನೀತಿ ಕಾಯ್ದೆಯನ್ನು ಯಾವಾಗ ಜಾರಿಗೆ ತಂದರು?
ಉತ್ತರ- 1988 ರಲ್ಲಿ
17. ವೃಕ್ಷಮಾತೆ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ- ಸಾಲುಮರದ ತಿಮ್ಮಕ್ಕ
18. ಚಿಪ್ಕೋ ಚಳುವಳಿ ಯನ್ನು ಯಾರು ಪ್ರಾರಂಭಿಸಿದರು?
ಉತ್ತರ- ಸುಂದರಲಾಲ್ ಬಹುಗುಣ
20. ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ ಯಾವುದು?
ಉತ್ತರ- ನೈಟ್ರೋಜನ್
21. ವಾಯುವಿನಲ್ಲಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲ ಎಷ್ಟು ಪ್ರಮಾಣದಲ್ಲಿದೆ?
ಉತ್ತರ- ಶೇಕಡ 21
22. ವಾಯುವಿನಲ್ಲಿ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ ಎಷ್ಟಿದೆ?
ಉತ್ತರ: 0.04
23. ಭೂಮಿಯ ಮೇಲ್ಭಾಗ ಶೇಕಡ ಎಷ್ಟು ನೀರಿದೆ?
ಉತ್ತರ- 71 ಶೇಕಡ
24. ಭೂಮಿಯ ಮೇಲೆ ನೀರು ಹೆಚ್ಚಾಗಿ ಎಲ್ಲಿ ಕಂಡುಬರುತ್ತದೆ?
ಉತ್ತರ- ಸಾಗರಗಳಲ್ಲಿ
25. ಎಷ್ಟು ಬಗೆಯ ಕೃಷಿಕರು ಇರುತ್ತಾರೆ?
ಉತ್ತರ- 3
26. ನಿನ್ನ ಜಿಲ್ಲೆಯ ಮುಖ್ಯ ಆಹಾರ ಯಾವುದು?
ಉತ್ತರ- ಜೋಳ ಅಕ್ಕಿ ಇತ್ಯಾದಿ
27. ದ್ರವ್ಯದ ಸ್ಥಿತಿಗಳು ಎಷ್ಟು?
ಉತ್ತರ-3
28. ಘನ ವಸ್ತುಗಳಲ್ಲಿ ಅನುಗಳ ಜೋಡನೆ ಹೇಗಿರುತ್ತದೆ?
ಉತ್ತರ-ಒತ್ತೊತಾಗಿ.
29. ದ್ರವ್ಯರಾಶಿಯ ಅಂತರಾಷ್ಟ್ರೀಯ ಮೂಲಮಾನ ಯಾವುದು?
ಉತ್ತರ- ಕಿಲೋಗ್ರಾಂ
30. ಸಾಂದ್ರತೆಯ ಅಂತರಾಷ್ಟ್ರೀಯ ಮೂಲಮಾನ ಯಾವುದು?
ಉತ್ತರ- kg/m3
31. ಹೈಡ್ರೋಜನ್ ಸಂಕೇತ ವೇನು?
ಉತ್ತರ- H
32. ಎರಡು ಅಥವಾ ಎರಡಕ್ಕಿಂತ ಹೆಚ್ಚು ಧಾತುಗಳು ರಾಸಾಯನಿಕವಾಗಿ ಬೆರೆತಾಗ ಏನು ಉಂಟಾಗುತ್ತವೆ?
ಉತ್ತರ- ಸಂಯುಕ್ತ
33. ಪ್ರಚನ ಶಕ್ತಿ ಮತ್ತು ಚಲನಶಕ್ತಿ ಗಳ ಒಟ್ಟು ಮೊತ್ತ ವನ್ನು ಏನೆಂದು ಕರೆಯುತ್ತಾರೆ?
ಉತ್ತರ- ಯಾಂತ್ರಿಕ ಶಕ್ತಿ
34. ಭೂಮಿಯ ಆಕಾರ ಯಾವುದು?
ಉತ್ತರ- ಜಿಯಾಡ್
35. ಸೌರವ್ಯೂಹದಲ್ಲಿ ಎಷ್ಟು ಗ್ರಹಗಳಿವೆ?
ಉತ್ತರ- 8
36. ಸೂರ್ಯನಿಗೆ ಹತ್ತಿರವಿರುವ ಗ್ರಹ ಯಾವುದು?
ಉತ್ತರ- ಬುಧ
37. ಜೀವಿಗಳು ವಾಸಿಸುವ ಏಕೈಕ ಗ್ರಹ ಯಾವುದು?
ಉತ್ತರ- ಭೂಮಿ
38. ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ ಯಾವುದು?
ಉತ್ತರ- ಗುರು ಗ್ರಹ
39. ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಗ್ರಹ ಯಾವುದು?
ಉತ್ತರ- ಶುಕ್ರ
40. ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ ಯಾವುದು?
ಉತ್ತರ- ನೆಪ್ಚೂನ್
41. ಭೂಮಿಯ ಉಪಗ್ರಹ ಯಾವುದು?
ಉತ್ತರ- ಚಂದ್ರ
42. ಅತ್ಯಂತ ಸುಂದರವಾದ ಗ್ರಹ ಯಾವುದ?
ಉತ್ತರ- ಶನಿ
43. 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಧೂಮಕೇತು ಯಾವುದು?
ಉತ್ತರ: ಹ್ಯಾಲಿ ಧೂಮಕೇತು
44. ಚಂದ್ರನ ಮೇಲೆ ಮೊದಲು ಕಾಲಿಟ್ಟವರು ಯಾರು? ಉತ್ತರ- ನೀಲ್ ಆರ್ಮ್ಸ್ಟ್ರಾಂಗ್
45. ಮಂಗಳ ಗ್ರಹದ ಉಪಗ್ರಹಗಳು ಯಾವವು?
ಉತ್ತರ: ಫೋಬೋಸ್ ಮತ್ತು ಡೈ ಮೋಜ್